ಫೀಲ್ಡಿಂಗ್, ಸಾರಾ
	1710-1768. ಕಾದಂಬರಿಗಾರ್ತಿ. ಖ್ಯಾತ ಕಾದಂಬರಿಕಾರ ಹೆನ್ರಿ ಫೀಲ್ಡಿಂಗನ ಸೋದರಿ. ಹುಟ್ಟಿದ್ದು ಡಾರ್ಸೆಟ್ಟಿನ ಈಸ್ಟ್ ಸ್ಟೂರ್‍ನಲ್ಲಿ. ಈಕೆ ಬರೆದ ಕಾದಂಬರಿಗಳಲ್ಲಿ ದಿ ಅಡ್ವೆಂಚರ್ಸ್ ಆಫ್ ಡೇವಿಡ್ ಸಿಂಪಲ್ ಇನ್ ಸರ್ಚ್ ಆಫ್ ಎ ಫೆಯ್ತ್‍ಫುಲ್ ಫ್ರೆಂಡ್ (1744), `ದಿ ಗವರ್ನೆಸ್ (1749), ಮತ್ತು ದಿ ಕೌಂಟೆಸ್ ಆಫ್ ಡೆಲ್ವಿನ್ (1759)-ಇವು ಗಮನಾರ್ಹ. ಈಕೆ ಕ್ಸೆನಫನ್ನನ ಮೆಮೊರ್ಯಾಬಿಲಿಯ ಮತ್ತು ಅಸಲಾಜಿಯ ಎಂಬ ಕೃತಿಗಳನ್ನು ಅನುವಾದ ಮಾಡಿದ್ದಾಳೆ (1762)      *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ